ಶುಕ್ರವಾರ, ಜನವರಿ 15, 2010

ಭ್ರಮೆ - ವಾಸ್ತವತೆ


ಭ್ರಮೆ : ತೂಕ ಕಡಿಮೆ ಮಾಡಿಕೊಳ್ಳಲು ಆಹಾರದ ಪ್ರಮಾಣ ಕಡಿಮೆ ಮಾಡಬೇಕು.
ವಾಸ್ತವ : ಆಹಾರದ ಪ್ರಮಾಣ ಕಡಿಮೆ ಮಾಡಿಕೊಳ್ಳುವುದರಿಂದ ಪೌಷ್ಟಿಕಾಂಶದ ಕೊರತೆಯಾಗುತ್ತದೆ. ಹೀಗಾಗಿ ಕ್ಯಾಲೋರಿ ಪ್ರಮಾಣ ಕಡಿಮೆ ಮಾಡಿಕೊಳ್ಳಿ, ಆಹಾರದ್ದಲ್ಲ.

ಭ್ರಮೆ : ಜ್ವರ ಬಂದಾಗ ಗಟ್ಟಿ ಆಹಾರ ಸೇವಿಸಬಾರದು. ಕೇವಲ ಅನ್ನ, ಹಾಲು, ದ್ರವ ಪದಾರ್ಥ ಸೇವಿಸಬೇಕು.
ವಾಸ್ತವ : ಜ್ವರ ಬಂದಾಗ ಪೌಷ್ಟಿಕ ಆಹಾರ ಸೇವಿಸಬೇಕು. ಇಲ್ಲವಾದರೆ ನಿಶ್ಯಕ್ತಿ ಉಂಟಾಗುತ್ತದೆ.

ಭ್ರಮೆ : ವೃದ್ಧಾವಸ್ಥೆಯಲ್ಲಿ ಪಚನ ಕ್ರಿಯೆ ದುರ್ಬಲವಾಗಿರುತ್ತದೆ. ಹೀಗಾಗಿ ಕಡಿಮೆ ತಿನ್ನಬೇಕು.
ವಾಸ್ತವ : ವೃದ್ದಾವಸ್ಥೆಯಲ್ಲಿ ಸಮತೋಲನ ಆಹಾರ ಸೇವಿಸಬೇಕು. ಹಾಲನ್ನು ಅವಶ್ಯವಾಗಿ ತೆಗೆದುಕೊಳ್ಳಿ.

ಭ್ರಮೆ : ಹಣ್ಣುಗಳಿಗಿಂತ ಅವುಗಳ ರಸ ಸೇವನೆ ಹೆಚ್ಚು ಲಾಭಕರ.
ವಾಸ್ತವ : ಹಣ್ಣಿನ ರಸಕ್ಕಿಂತ ಅವುಗಳನ್ನು ನೇರವಾಗಿ ಸೇವಿಸುವುದು ಉಪಯುಕ್ತ. ಇದರಿಂದ ದೇಹಕ್ಕೆ ದೊರೆಯುವ ನಾರಿನಂಶ ಹಲವು ಕಾಯಿಲೆಗಳನ್ನು ದೂರವಿಡುತ್ತದೆ.

ಭ್ರಮೆ : ಆಗತಾನೆ ಕರೆದ ಹಸಿ ಹಾಲು ಹೆಚ್ಚು ಪೌಷ್ಟಿಕವಾಗಿರುತ್ತದೆ.
ವಾಸ್ತವ : ಕುದಿಸದೆ ಬಳಸುವ ಹಾಲು ಹೆಚ್ಚು ಸೋಂಕಿನಿಂದ ಕೂಡಿರುತ್ತದೆ. ಹಾಗಾಗಿ ಕುದಿಸಿದ ಹಾಲನ್ನೇ ಬಳಸಿ.

ಭ್ರಮೆ : ಶೀತ - ನೆಗಡಿ ಸಂದರ್ಭದಲ್ಲಿ ಹುಳಿ ಹಣ್ಣುಗಳನ್ನು ತಿನ್ನಬಾರದು.

ವಾಸ್ತವ : ಇಂಥ ಸಂದರ್ಭಗಳಲ್ಲಿ ಅಗತ್ಯವಾಗಿ ಹುಳಿ ಹಣ್ಣುಗಳನ್ನು ಸೇವಿಸಬೇಕು. ಅವುಗಳಲ್ಲಿ ಇರುವ ’ಸಿ’ ವಿಟಮಿನ್, ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಭ್ರಮೆ : ರಿಫ್ಡೈನ್ ಎಣ್ಣೆಯಲ್ಲಿ ಕೊಬ್ಬಿನಂಶ ಕಡಿಮೆ ಇರುತ್ತದೆ.
ವಾಸ್ತವ : ಅದರಲ್ಲೂ ಕೊಬ್ಬಿನಂಶ ಇರುತ್ತದೆ. ಆದರೆ ಕೊಲೆಸ್ಟರಾಲ್ ಕಡಿಮೆ ಇರುತ್ತದೆ.

ಭ್ರಮೆ : ತರಕಾರಿಗಳ ಮೇಲಿನ ಸಿಪ್ಪೆ ತೆಗೆಯಬೇಕು, ಅವುಗಳಿಂದ ಏನೂ ಉಪಯೋಗವಿಲ್ಲ.
ವಾಸ್ತವ : ಸಿಪ್ಪೆಯಲ್ಲಿ ನಾರಿನಂಶ ಹೇರಳವಾಗಿರುತ್ತದೆ. ಅದು ಪಚನ ಕ್ರಿಯೆಗೆ ಅನುಕೂಲ. ಮಲಬದ್ದತೆ ತಡೆಯಲು ಸಹಾಯಕ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ